ವಿಷಯಕ್ಕೆ ಹೋಗಿ
ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಬೆಂಗಳೂರು– ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದರು. ವಿಶೇಷ ರೈಲು (06575) ಇಂದು ಬೆಂಗಳೂರಿನಿಂದ ಹೊರಟು ಯಶವಂತಪುರ, ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ ನಿಲ್ದಾಣಗಳಲ್ಲಿ ನಿಲುಗಡೆಯಾಗಿ ರಾತ್ರಿ 8 ಗಂಟೆಗೆ ಬೆಳಗಾವಿ ತಲುಪಲಿದೆ..ಆದರೆ, ಈ ರೈಲಿನ ಟಿಕೆಟ್ ದರ ದುಬಾರಿ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟಿಕೆಟ್ ದರ ಈ ಕೆಳಗಿನಂತಿವೆ.ಟಿಕೆಟ್ ದರ (ಚೇರ್‌ಕಾರ್ / ಎಕ್ಸಿಕ್ಯೂಟಿವ್ ಚೇರ್‌ಕಾರ್)ಬೆಂಗಳೂರು–ಬೆಳಗಾವಿ: ₹1118 / ₹2279ಬೆಂಗಳೂರು–ಧಾರವಾಡ: ₹914 / ₹1863ಬೆಂಗಳೂರು–ಹುಬ್ಬಳ್ಳಿ: ₹885 / ₹1802ಬೆಂಗಳೂರು–ಹಾವೇರಿ: ₹778 / ₹1580ಬೆಂಗಳೂರು–ದಾವಣಗೆರೆ: ₹676 / ₹1315ಬೆಂಗಳೂರು–ತುಮಕೂರು: ₹298 / ₹580ಬೆಂಗಳೂರು–ಯಶವಂತಪುರ: ₹242 / ₹503ನಿಯಮಿತ ಸಂಚಾರ (ಆಗಸ್ಟ್ 11ರಿಂದ)1000411095ವಂದೇ ಭಾರತ ರೈಲ್ವೆ ವೇಳಾ ಪಟ್ಟಿಬೆಳಗಾವಿ–ಬೆಂಗಳೂರು ವಂದೇ ಭಾರತ್ (26751) ಬೆಳಿಗ್ಗೆ 5.20ಕ್ಕೆ ಬೆಳಗಾವಿಯಿಂದ ಹೊರಟು ಮಧ್ಯಾಹ್ನ 1.50ಕ್ಕೆ ಬೆಂಗಳೂರು ತಲುಪಲಿದೆ. ಮಾರ್ಗ ಮಧ್ಯೆ:ಧಾರವಾಡ: 7.08/7.10ಹುಬ್ಬಳ್ಳಿ: 7.30/7.35ಹಾವೇರಿ: 8.35/8.37ದಾವಣಗೆರೆ: 9.25/9.27ತುಮಕೂರು: 12.15/12.17ಯಶವಂತಪುರ: 1.03/1.05 ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ವರದಿ - ರಮೇಶ್ ಕಾಂಬಳೆ ನ್ಯೂಸ್ ಬ್ಯೂರೋ ಬೆಂಗಳೂರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು