ವಿಷಯಕ್ಕೆ ಹೋಗಿ
ಹುಕ್ಕೇರಿ : ಆಗಸ್ಟ , 2 ರಂದು ಹುಕ್ಕೇರಿ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕುರುಬ ಸಮುದಾಯದ ಪ್ರಮುಖ ಮುಖಂಡರು, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಒಕ್ಕೂಟ ಸಂಘದ ಅಧ್ಯಕ್ಷರಾದ ಶ್ರೀ ಶಂಕರ ಹೆಗಡೆ ಅವರು ಮಾತನಾಡಿದರು.ಅವರು ಇತ್ತೀಚೆಗೆ ಅರಣ್ಯ ಪ್ರದೇಶಗಳಲ್ಲಿ ಕುರಿ ಮೇಯಿಸುವ ಬಗ್ಗೆ ಜಾರಿಗೆ ತಂದಿರುವ ನಿರ್ಬಂಧದ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಗುಡ್ಡು ಗಾಡು ಪ್ರದೇಶಗಳಲ್ಲಿ ಕುರಿ ಮೇಯಲು ಅನುಮತಿ ನೀಡಬೇಕು ಎಂಬುದು ನಮ್ಮ ಮಹತ್ವದ ಬೇಡಿಕೆ,” ಎಂದು ಅವರು ಸರಳವಾಗಿಯೂ ದಿಟ್ಟವಾಗಿಯೂ ಹೇಳಿದರು.ಸರ್ಕಾರದ ಇತ್ತೀಚಿನ ಆದೇಶವು ಕುರುಬ ಸಮುದಾಯದ ಮೂಲ ಜೀವನವಿಧಾನ ಮತ್ತು ಆರ್ಥಿಕ ಸ್ಥಿತಿಗೆ ಆಘಾತ ಉಂಟುಮಾಡುತ್ತಿದೆ ಎಂಬುದು ಅವರ ಮಾತುಗಳಲ್ಲಿ ಸ್ಪಷ್ಟವಾಗಿತ್ತು. “ಈ ನಿರ್ಬಂಧಗಳು ನಿಸರ್ಗದ ಜೊತೆಗೆ ಬದುಕು ಕಟ್ಟಿಕೊಂಡಿರುವ ಸಮುದಾಯದ ಬದುಕಿಗೆ ಪೂರಕವಲ್ಲ. ಸರ್ಕಾರ ಈ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು,” ಎಂದು ಅವರು ಒತ್ತಾಯಿಸಿದರು.ಗುಡಸ ಶಿರಹಟ್ಟಿ, ಸಾರಾಪೂರ ಮುಂತಾದ ಪ್ರದೇಶಗಳಲ್ಲಿ ಅತಿಕ್ರಮಣಗೊಂಡಿರುವ ಗಾಯರಾಣ ಜಾಗವನ್ನು ಸಮುದಾಯದ ಪಾಳುದಾರರಿಗೆ ಮರಳಿ ನೀಡಬೇಕು ಎಂಬ ಬೇಡಿಕೆಯನ್ನು ಕೂಡ ಅವರು ಮಂಡಿಸಿದರು. ಈ ಕುರಿತಂತೆ ತಾಲೂಕು ದಂಡಾಧಿಕಾರಿಗಳಿಗೆ ಅಧಿಕೃತ ಮನವಿಯನ್ನೂ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.ಅವರು ಕೊನೆಗೆ, “ಸಮುದಾಯದ ಜೀವನಚರ್ಯೆಗೆ ಪೂರಕವಾದ, ಸಹಾನುಭೂತಿಪೂರ್ಣ ಮತ್ತು ನ್ಯಾಯಸಮ್ಮತ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನಾವೆಲ್ಲಾ ಒಟ್ಟಾಗಿ ಮುಂದಿನ ಹಂತದ ಹೋರಾಟಕ್ಕೆ ಮುಂದಾಗುತ್ತೇವೆ,” ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಶಂಕರ ಹಾಲಪ್ಪಾ ಹೆಗಡೆ.ಭೀಮಸೇನ ಬಾಗಿ.ಮಾರುತಿ ದಡ್ಡಿ. ಬೀರಪ್ಪ ಹಾಲಟ್ಟಿ.ಸುರೇಶ ಗೌವಡಿ. ಕುಮಾರ ಬೆಂಕಿ. ಶಿಂದೂರ ಗುಡಸ. ಮುಂತಾದವರು ಉಪಸ್ಥಿತರಿದ್ದರುವರದಿ. ಡಾ : ರವಿ ಬಿ ಕಾಂಬಳೆ,ಹುಕ್ಕೇರಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು