ವಿಷಯಕ್ಕೆ ಹೋಗಿ
ಹುಕ್ಕೇರಿ : ಗುಡಸ ಗ್ರಾಮದ ಕುರಿಗಾಹಿಗಳು ತಮ್ಮ ಬದುಕಿಗೆ ಅವಿಭಾಜ್ಯವಾಗಿರುವ ಗೋಮಾಳ ಜಮೀನಿನ ಅತಿಕ್ರಮಣದ ವಿರುದ್ಧ ಶಕ್ತಿಶಾಲಿ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲೆಯ ಡಿಸಿ ಮಹಮ್ಮದ್ ರೋಷನ್ ಅವರಿಗೆ ಮನವಿ ಸಲ್ಲಿಸುತ್ತ, ಕೂಡಲೇ 258 ಎಕರೆ ಸರ್ಕಾರಿ ಗೋಮಾಳ ಜಮೀನು ಅತಿಕ್ರಮಣದಿಂದ ಮುಕ್ತಗೊಳಿಸಲು ಆಗ್ರಹಿಸಿದರು.“ಅತಿಕ್ರಮಣದಿಂದ ಕುರಿ ಮೇಯಿಸಲು ಜಾಗವಿಲ್ಲ!” ಎಂದು ಅಳಲು ತೋಡಿಕೊಂಡ ಕುರಿಗಾಹಿಗಳು, ತಮ್ಮ ಬದುಕಿಗೆ ಬೇಕಾದ ಹಕ್ಕು ತಿರಸ್ಕೃತವಾಗುತ್ತಿದೆ ಎಂಬ ಬೇಸರ ವ್ಯಕ್ತಪಡಿಸಿದರು. ಸರ್ಕಾರದ ಗೋಮಾಳ ಜಮೀನನ್ನು ಕೆಲವರು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದಾರೆ ಎಂಬ ಆರೋಪ ಹೇರಿದರು.ಸ್ಥಳೀಯ ಮಟ್ಟದ ಹಲವಾರು ಮನವಿಗಳಿಗೂ ಉತ್ತರ ಇಲ್ಲ ಎಂದು ಅವರು ಆರೋಪಿಸಿದರು. ಅಧಿಕಾರಿಗಳು ಉಲ್ಲೇಖಿತ ಜಾಗದ ಪರಿಶೀಲನೆ ಮಾಡಿದರೂ ಯಾವುದೇ ಕ್ರಮ ಕ್ಯೆಗೋಳಲಿಲ್ಲ ಎಂದು ತಿಳಿಸಿದ್ದಾರೆ."ಪಶುಪಾಲಕರು ನಿರ್ಲಕ್ಷಿತ ನಾಗರಿಕರಾಗಿದ್ದರೆ, ಮುಂದಿನ ತಲೆಮಾರಿಗೆ ಗೋವು-ಮೇಕೆ ಗಾವಲದ ಸಂಸ್ಕೃತಿಯೆ ಉಳಿಯಲ್ಲ," ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.ಅವರು ಜಿಲ್ಲಾಡಳಿತದಿಂದ ತ್ವರಿತ ಕ್ರಮಕ್ಕೆ ನಿರೀಕ್ಷೆ ಹೊಂದಿದ್ದಾರೆ.ವರದಿ : ಸಂತೋಷ ಪಾಟೀಲ, ಹುಕ್ಕೇರಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು