ವಿಷಯಕ್ಕೆ ಹೋಗಿ
ಚಿಕ್ಕೋಡಿ : ತಾಲೂಕಾ ತಹಶೀಲ್ದಾರರಾದ ಚಿದಂಬರ ಎಸ್. ಕುಲಕರ್ಣಿ ಇವರನ್ನು ಸರಕಾರ ಚಿಕ್ಕೋಡಿಯಿಂದ ವರ್ಗಾವಣೆ ಮಾಡಿದ್ದು, ಇದನ್ನು ರದ್ದು ಮಾಡಬೇಕೆಂದು, ಕರ್ನಾಟಕ ರಕ್ಷಣಾ ವೇದಿಕೆಯಿಂದ, ಮುಖ್ಯಮಂತ್ರಿ ಇವರಿಗೆ ಮನವಿ ಸಲ್ಲಿಕೆ..ಚಿಕ್ಕೋಡಿ ತಾಲೂಕಾ ಕಚೇರಿಯಲ್ಲಿ ಚಿದಂಬರ ಎಸ್. ಕುಲಕರ್ಣಿ ಅವರು ತಹಶಿಲ್ದಾರರಾಗಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದು, ಅವರನ್ನು ಬೇರೆಡೆ ಸರಕಾರವು ವರ್ಗಾವಣೆ ಮಾಡಿದೆ, ವರ್ಗಾವಣೆ ಆದೇಶವನ್ನು ಹಿಂಪಡೆಯಬೇಕೆಂದು, ಕರ್ನಾಟಕ ರಕ್ಷಣಾ ವೇದಿಕೆಯಿಂದ ವಿಭಾಗೀಯ ದಂಡಾಧಿಕಾರಿಗಳ ಮುಖಾಂತರ ಮುಖ್ಯ ಮಂತ್ರಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು.ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ ಕುಲಕರ್ಣಿ ಸಾಹೇಬರು ಯಾವಾಗಲೂ ಜನಪರ ಕೆಲಸ ಮಾಡುತ್ತಾ ಬಂದಿದ್ದಾರೆ, ಇವರ ಕಾರ್ಯಗಳು ಪಾರದರ್ಶಕ ಇರುವುದರಿಂದ ಜನರು ಇವರನ್ನು ಮೆಚ್ಚುತ್ತಾರೆ. ರೈತರ, ಬಡವರ, ದೀನ- ದಲಿತರ ಸೇವೆ ಮಾಡುವ ಇವರು ಮೃದು ಸ್ವಭಾವದವರು, ಕೆಲಸ ಮಾಡುವಾಗ ಎಂದಿಗೂ ಇವರು ಸಮಯ ನೋಡಲಿಲ್ಲ, ಹಗಲು- ರಾತ್ರಿ ಕೆಲಸ ಮಾಡುವ ಕಾಯಕಯೋಗಿ ಆಗಿರುವ, ಕುಲಕರ್ಣಿ ಸಾಹೇಬರನ್ನು ಚಿಕ್ಕೋಡಿ ಯಿಂದ ಬೇರೆಡೆ ವರ್ಗಾವಣೆ ಮಾಡದೇ, ಇಲ್ಲಿಯೇ ಮುಂದೆವರಿಸಬೇಕೆಂದು ಹೇಳಿದರು.ಕರವೇ ತಾಲೂಕಾ ಅಧ್ಯಕ್ಷ ಸಂಜು ಬಡಿಗೇರ ಮಾತನಾಡಿ ಇವರು ಕೊರೋನಾ ಮತ್ತು ಪ್ರವಾಹ ಸಮಯದಲ್ಲಿ ಮಾಡಿರುವ ಕೆಲಸಗಳು ಜನಪರವಾಗಿವೆ, ಇವರಿಂದ ನಮ್ಮ ಭಾಗವು ಬಹಳಷ್ಟು ಅಭಿವೃದ್ಧಿ ಕಂಡಿದೆ, ಇವರ ವರ್ಗಾವಣೆಯ ವಿಷಯ ಇಲ್ಲಿಯ ಜನತೆಗೆ ಬಹಳ ಮುಜಗರ ತಂದಿದೆ, ದಯಮಾಡಿ ಸರಕಾರ ಇವರ ವರ್ಗಾವಣೆ ಯನ್ನು ರದ್ದು ಮಾಡಲಿ ಎಂದು ಹೇಳಿದರು.ಈ ಸಂಧರ್ಭದಲ್ಲಿ ಕರವೇ ತಾಲೂಕಾ ಉಪಾಧ್ಯಕ್ಷ ಸಂತೋಷ ಪೂಜೇರಿ, ಹೋರಾಟಗಾರರಾದ ಮೋಹಕ ಪಾಟೀಲ, ಶಂಕರ ಡಂಗೇರ, ಶಿವು ಮದಾಳೆ, ಸಚಿವ ದೊಡ್ಡಮನಿ, ಶಂಕರ ಪೂಜಾರಿ, ರಫೀಕ ಪಠಾಣ, ಸಂಜಯ ಬೇವಿನಗಿಡ, ಅಪ್ಪಾಸಾಹೇಬ ಹಿರೇಕೋಡಿ, ಖಾನಪ್ಪಾ ಬಾಡ, ಸುರೇಶ ಕಡ್ಡಿ, ಸುರೇಶ ದತವಾಡೆ, ಸಂತೋಷ ಕುರಣೆ, ಶಿವಾಜಿ ಖಾಡೆ, ಅನೀಲ ನಾವಿ, ಸಾಜೀದ ಬಿಳಗಿ ಸೇರಿದಂತೆ ಇನ್ನಿತರ ಕನ್ನಡ ಪರ ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು