ವಿಷಯಕ್ಕೆ ಹೋಗಿ
ಹುಕ್ಕೇರಿ: ಪಟ್ಟಣದ ಸರಕಾರಿ ಆಸ್ಪತ್ರೆ ಆವರಣದಲ್ಲಿ ನಿರ್ಮಾಣಗೊಂಡ ವೈದ್ಯರ ವಿಶ್ರಾಂತಿ ಮತ್ತು ವಸತಿ ಗೃಹದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅಸಮಾಧಾನದ ಸದ್ದು ಕೇಳಿಬಂದಿದೆ.ಈ ಸಮಾರಂಭದ ಬ್ಯಾನರ್‌ಗಳಲ್ಲಿ ಚಿಕ್ಕೋಡಿ ಲೋಕಸಭಾ ಸಂಸದೆ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಅವರ ಭಾವಚಿತ್ರಕ್ಕೆ ಅವಕಾಶ ನೀಡದಿರುವುದು ವಿವಾದಕ್ಕೆ ಕಾರಣವಾಯಿತು. ಸಮಾರಂಭ ಆರಂಭದ ಮುನ್ನ ಜಾರಕಿಹೊಳಿ ಅಭಿಮಾನಿಗಳು ಪ್ರಿಯಾಂಕಾ ಜಾರಕಿಹೊಳಿ ಭಾವಚಿತ್ರ ಹೊಂದಿದ ಬ್ಯಾನರ್‌ಗಳನ್ನು ಸ್ವತಃ ಅಳವಡಿಸಿದರು. ಸಂಬಂಧಿಸಿದ ಅಧಿಕಾರಿಗಳ ಈ ನಿರ್ಲಕ್ಷ್ಯವನ್ನು ಆರೋಗ್ಯ ಇಲಾಖೆಯ ನಾಮ ನಿರ್ದೇಶಿತರು ಬೀಮಗೌಡ ಬಸಗೌಡ ಅಮ್ಮಣಗಿ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಕಾರ್ಯಕ್ರಮ ಮುಗಿಸಿ ಹೊರಗೆ ಹೋಗುತ್ತಿದ್ದ ವೇಳೆ, ರೈತರಿಂದ ಬಂದ ಮನವಿ ಪತ್ರ ಸ್ವೀಕರಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನಿರಾಕರಿಸಿದ್ದರಿಂದ ಉದ್ವಿಗ್ನತೆ ಸೃಷ್ಟಿಯಾಯಿತು. ಸಚಿವರ ಕಾರನ್ನು ರೈತರು ಮುತ್ತಿಗೆ ಹಾಕಿ ಜೋರಾದ ಪ್ರತಿಭಟನೆ ನಡೆಸಿದರು.ಘಟನೆ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ರೈತರ ಮೇಲೆ ಗುಂಡವರ್ತನೆ ತೋರಿದ ಆರೋಪ ಕೇಳಿಬಂದಿದೆ. ಈ ಕ್ರಮದಿಂದ ರೈತರು ಇನ್ನಷ್ಟು ಆಕ್ರೋಶಗೊಂಡು, ಸಚಿವ ದಿನೇಶ್ ಗುಂಡೂರಾವ್ ಹಾಗೂ ಸ್ಥಳೀಯ ಪೊಲೀಸರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.ರೈತರು ತಮ್ಮ ಬೇಡಿಕೆಗಳನ್ನು ಸರ್ಕಾರ ಗಮನಿಸದಿರುವುದು ಹಾಗೂ ಪೊಲೀಸ್ ವರ್ತನೆಗೆ ಖಂಡನೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ. ವರದಿ : ಸಂತೋಷ ಪಾಟೀಲ, ಹುಕ್ಕೇರಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು