ವಿಷಯಕ್ಕೆ ಹೋಗಿ
ಗೋಕಾಕ : ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಭಾರತದ ಸಂವಿಧಾನ ಕುರಿತು ನಟ ಪ್ರಥಮ್ ನೀಡಿದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಗೋಕಾಕದ ಬಸವೇಶ್ವರ ವೃತ್ತದಲ್ಲಿ ವಿವಿಧ ದಲಿತಪರ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದವು.ಮಾನವ ಸರಪಳಿ ನಿರ್ಮಿಸಿ ಆರಂಭವಾದ ಪ್ರತಿಭಟನೆಯಲ್ಲಿ, ಪ್ರತಿಭಟನಾಕಾರರು ನಟ ಪ್ರಥಮ್ ಭಾವಚಿತ್ರಕ್ಕೆ ಚಪ್ಪಲಿ ಎಟು ಹಾಕಿ, ರಸ್ತೆ ತಡೆ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಪರಿಣಾಮವಾಗಿ ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಯಿತು.ದಲಿತ ಮುಖಂಡ ಈಶ್ವರ ಗುಡಜ ಅವರು, "ಸಂವಿಧಾನದಲ್ಲಿ ಲೋಪವಿಲ್ಲ, ಪ್ರಥಮ್ ನಿನ್ನಲ್ಲೆ ಲೋಪವಿದೆ. ನೀನು ಮಾತನಾಡುತ್ತಿರುವುದೇ ಸಂವಿಧಾನದ ಫಲ," ಎಂದು ಕಿಡಿಕಾರಿದರು. ಅವರು ನಟ ಪ್ರಥಮ್ ಬಿಗ್‌ಬಾಸ್ ಸ್ಪರ್ಧಿಯಾಗಿದ್ದಾಗ ಆತ್ಮಹತ್ಯೆ ಯತ್ನಿಸಿದ್ದನ್ನು ಉಲ್ಲೇಖಿಸಿ, ಅಧಿಕಾರಿಗಳು suo-motu ಕೇಸ್ ದಾಖಲಿಸಬೇಕೆಂದು ಒತ್ತಾಯಿಸಿದರು.ಮಹಿಳಾ ದಲಿತ ನಾಯಕಿ ಮಂಜುಳಾ ರಾಮಗಾನಟ್ಟಿ ಮಾತನಾಡುತ್ತಾ, "ಡಾ. ಬಾಬಾಸಾಹೇಬರ ಸಂವಿಧಾನವನ್ನು ಜಗತ್ತೆ ನಂಬುತ್ತಿದೆ. ಅದನ್ನು ಅವಹೇಳನ ಮಾಡಿದ ನಟನನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು. ಬೂಟಿನ ಧೂಳಿಗೂ ಸಮನಲ್ಲ ಪ್ರಥಮ್. ಜನಸಾಮಾನ್ಯರ ಮುಂದೆ ಕ್ಷಮೆಯಾಚಿಸಲಿ, ಇಲ್ಲವಾದರೆ ರಾಜ್ಯವ್ಯಾಪಿ ಹೋರಾಟ ನಡೆಯಲಿದೆ," ಎಂದು ಎಚ್ಚರಿಸಿದರು.ಪ್ರತಿಭಟನಾಕಾರರು ನಂತರ ಬಸವೇಶ್ವರ ವೃತ್ತದಿಂದ ಆಡಳಿತ ಸೌದದವರೆಗೆ ಪಾದಯಾತ್ರೆ ನಡೆಸಿ, ತಹಶೀಲ್ದಾರ್ ಮೂಲಕ ಪೊಲೀಸ್ ಮಹಾನಿರ್ದೇಶಕರಿಗೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದರು. ಆದರೆ ಮನವಿ ಸ್ವೀಕರಿಸುವಲ್ಲಿ ತಡವಾದುದರಿಂದ ತಹಶಿಲ್ದಾರ್ ವಿರುದ್ಧವೂ ದಿಕ್ಕಾರ ಕೂಗಿದರು.ಅಹಿತಕರ ಘಟನೆಗಳು ನಡೆಯದಂತೆ ಸ್ಥಳದಲ್ಲಿ ಭದ್ರತೆಗಾಗಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು.ಈ ಪ್ರತಿಭಟನೆಯಲ್ಲಿ ಈಶ್ವರ ಗುಡಜ್, ಸತೀಶ ಹರಿಜನ, ಗೊವಿಂದ ಕಳ್ಳಿಮಣಿ, ಸುದೀರ್ ಜೋಡಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ ಕುಮರೇಶಿ, ರಮೇಶ ಹರಿಜನ, ಶೆಟ್ಟೆಪ್ಪಾ ಮೇಸ್ತ್ರಿ ಹಾಗೂ ಮಂಜುಳಾ ರಾಮಗಾನಟ್ಟಿ ಸೇರಿದಂತೆ ಅನೇಕ ದಲಿತ ಮುಖಂಡರು ಭಾಗವಹಿಸಿದ್ದರು.ವರದಿ : ಡಾ. ರವಿ ಬಿ ಕಾಂಬಳೆ,ಗೋಕಾಕ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು