ವಿಷಯಕ್ಕೆ ಹೋಗಿ
ಚಿಕ್ಕೋಡಿ : ಚಿಕ್ಕೋಡಿ ತಾಲೂಕಿನ ಹಲವು ಪ್ರಮುಖ ರಸ್ತೆಗಳು ಮಳೆಯಿಂದಾಗಿ ಮತ್ತು ನಿರಂತರ ವಾಹನ ಸಂಚಾರದಿಂದ ತುಂಬಾ ಹಾಳಾಗಿವೆ. ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ಉಂಟಾಗಿದ್ದು, ಸಾರ್ವಜನಿಕರು ಸಂಚಾರ ಮಾಡುವಲ್ಲಿ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ವಿಶೇಷವಾಗಿ ವಿದ್ಯಾರ್ಥಿಗಳು, ರೈತರು ಹಾಗೂ ಹಿರಿಯ ನಾಗರಿಕರಿಗೆ ಬಹಳ ಅಡಚಣೆ ಉಂಟಾಗಿದೆ. ಅಪಘಾತಗಳ ಸಾಧ್ಯತೆಯೂ ಹೆಚ್ಚಾಗಿದೆ.ಆದ್ದರಿಂದ, ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ಚಿಕ್ಕೋಡಿ ತಾಲೂಕಿನ ಮುಖ್ಯ ಹಾಗೂ ಆಂತರಿಕ ರಸ್ತೆಗಳನ್ನು ಶೀಘ್ರದಲ್ಲೇ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಕರ್ನಾಟಕ ನವನಿರ್ಮಾಣ ಸೇನೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ನವನಿರ್ಮಾಣ ಸೇನೆ ಯುವ ಘಟಕದ ಅಧ್ಯಕ್ಷರು ಸೂರಜ್ ಜಮಾದಾರ, ಉಪಾಧ್ಯಕ್ಷರಾದ ವಿಷ್ಣು ಪಾಂಡವ್ , ಸಂಚಾಲಕರಾದ ರಾಘವೇಂದ್ರ ನೆಸ್ಕರ್ , ಮಹೇಶ್ ಮಗದುಮ್ , ಅಜಯ್ ಬಾನಕರೆ , ರಾಜೇಂದ್ರ ಪಾಟೀಲ್, ಮೋಹಿನ ಮುಲ್ತಾನಿ , ಇನ್ನಿತರರು ಉಪಸ್ಥಿತರಿದ್ದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು