ವಿಷಯಕ್ಕೆ ಹೋಗಿ
ರಾಯಬಾಗ : ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ಮಾಡಮಗೆರೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶ್ರೀ ಜಯಗೌಡ ಸಿದ್ದಗೌಡ ಪಾಟೀಲ್ ಇವರ ಮೇಲೆ ಹಲ್ಲೆಯನ್ನು ಖಂಡಿಸಿ ಇಂದು ರಾಯಬಾಗ ತಾಲೂಕ ಪಂಚಾಯತ್ ಕಾರ್ಯಾಲಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ಹಾಗೂ ನೌಕರರ ಸಂಘ ತಾಲೂಕ ಶಾಖೆ ರಾಯಬಾಗ ವತಿಯಿಂದ ಹಲ್ಲೆಕೊರರ ವಿರುದ್ಧ ಕಠಿಣ ಕ್ರಮಕ್ಕಾಗಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಗಳ ಪರವಾಗಿ ಹಾಜರಿದ್ದ ಶ್ರೀ.ಅರುಣ ಮಾಚಕನೂರ ಸಹಾಯಕ ನಿರ್ದೇಶಕರು (ಗ್ರಾ. ಉ) ಇವರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಉಮೇಶ್ ಪೋಳ ಅಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಶಾಖೆ ರಾಯಬಾಗ, ಭಗವಂತ ಮಸಾಲಾಜಿ ಅಧ್ಯಕ್ಷರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ಹಾಗೂ ನೌಕರರ ಸಂಘ ತಾಲೂಕ ಶಾಖೆ ರಾಯಬಾಗ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ನಿಂಗಪ್ಪ ಬಿರನಗಡ್ಡಿ, ವಿದ್ಯಾನಂದ ಬಾನಿ, ರವಿಕುಮಾರ್ ಮಠಪತಿ, ಕುಂತುನಾಥ್ ಶಿರಗೊಂಡ ಕಾರ್ಯದರ್ಶಿಗಳಾದ ವಿದ್ಯಾಸಾಗರ ಉಗಾರೆ, ಪ್ರಮೋದ ಬಸ್ತವಾಡೆ, ವಿನಯಕುಮಾರ್ ಪೂಜಾರಿ ಹಾಗೂ ಗ್ರಾಮ ಪಂಚಾಯತ ಮತ್ತು ತಾಲೂಕ ಪಂಚಾಯಿತಿ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು