ಚಿಕ್ಕೋಡಿ :ಚಿಕ್ಕೋಡಿ ಜಿಲ್ಲೆಗಾಗಿ ನಡೆದ ಧರಣಿ ಸತ್ಯಾಗ್ರಹ ಎರಡನೇ ದಿನವು ಯಶಸ್ವಿಗೊಳಿಸಿತು ಹೋರಾಟದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು, ಈ ಸಂಧರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಸಂಜು ಬಡಿಗೇರ ಮಾತನಾಡಿ, ಕಳೆದ ಮೂರು ದಶಕಗಳಿಂದ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ಹೋರಾಟ ಮಾಡುತ್ತಿದ್ದೇವೆ, ಆದರೆ ಚಿಕ್ಕೋಡಿ ವಿಭಾಗದ ಜನಪ್ರತಿನಿಧಿಗಳ ಇಚ್ಛಾ ಕೊರತೆಯ ಕಾರಣ ಜಿಲ್ಲೆ ಆಗದೇ ಇರುವುದು ದುರ್ದೈವದ ಸಂಗತಿಯಾಗಿದೆ. ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾದ ಬೆಳಗಾವಿ ಜಿಲ್ಲೆ ವಿಭಜನೆ ಆಗದೇ ಇರುವ ಕಾರಣ ಈ ಭಾಗದ ಜನರಿಗೆ ಎಲ್ಲ ತರದ ಅನಾನುಕೂಲತೆಗಳು ಹೆಚ್ಚಾಗಿವೆ. ಈ ಚಳಿಗಾಲ ಅಧಿವೇಶನದಲ್ಲಿ ಚಿಕ್ಕೋಡಿ ಜಿಲ್ಲೆಯಾಗಿ ಘೋಷಣೆ ಮಾಡಬೇಕು, ಇಲ್ಲವಾದರೆ ಕಿತ್ತೂರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿ ಉಗ್ರ ಹೋರಾಟ ಮಾಡಲಾಗುವು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು...ನಿವೃತ್ತ ಶಿಕ್ಷಕರಾದ ಚಂದ್ರಶೇಖರ ಅರಭಾವಿ ಅವರು ಮಾತನಾಡಿ, ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಆಗುವುದರಿಂದ ರೈತರಿಗೆ, ವಾಪಾರಸ್ಥರಿಗೆ ಹಾಗೂ ಪದವೀಧರರಿಗೆ ಉದ್ಯೋಗದ ಅವಕಾಶಗಳನ್ನು ಕಲ್ಪಿಸಿದಂತಾಗಲಿದೆ ಹಾಗೂ ಅಥಣಿ-ಕಾಗವಾಡ ಭಾಗದ ಜನತೆಗೆ ಜಿಲ್ಲಾ ಕೇಂದ್ರ ಸಮೀಪಿಸುವುದರಿಂದ ಆರ್ಥಿಕ ಹೊರೆ ಕಡಿಮೆಯಗಲಿದೆ ಎಂದು ಹೇಳಿದರು..ಈ ಸಂಧರ್ಭದಲ್ಲಿ ಹೋರಾಟಗಾರರಾದ, ಪ್ರತಾಪಗೌಡ ಪಾಟೀಲ, ಅನಿಲ ನಾವಿ, ರಮೇಶ ಪಾಟೀಲ, ಮಹಾದೇವ ಬರ್ಗಾಲೆ, ಶ್ರೀಕಾಂತ ಅಸೋದೆ, ಶಿವಾಜಿ ಖಾಡೆ, ಸುರೇಶ ಮಾನೆ, ಮಲಕಾರಿ ಬಣ್ಣೆ, ಶ್ರೀಕಾಂತ ಖಾಡೆ, ದುರದುಂಡಿ ಬಡಿಗೇರ, ಮೋಹನ ಪಾಟೀಲ, ಶಂಕರ ಅವಡಖಾನ, ಸರದಾರ ಪಟೇಲ, ಕೇದಾರಿ ಬರ್ಗೆ, ಖಾನಪ್ಪಾ ಬಾಡ, ಶಿವಲಿಂಗ ವಗ್ಗೆ, ರಫೀಕ ಪಠಾಣ, ಸೇರಿದಂತೆ ನೂರಾರು ಜನ ಹೋರಾಟಗಾರರು ಉಪಸ್ಥಿತರಿದ್ದರು..

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಕ್ಕೇರಿ : ಜುಲೈ 29 – ಹುಕ್ಕೇರಿ ತಾಲೂಕಿನ ಶಿಂದಿಹಟ್ಟಿ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆ ಸುಟ್ಟು ಸುಮಾರು ₹25 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ರಾಮಪ್ಪ ಲಕ್ಷ್ಮಣ ಮಗದುಮ್ಮ ಅವರ ಮನೆಗೆ ಈ ದುರ್ಘಟನೆ ಸಂಭವಿಸಿದ್ದು, ಕುಟುಂಬ ಸಂಪೂರ್ಣವಾಗಿ ಬೀದಿಗೆ ಬಿದ್ದಿದೆ ಎಂದು ನೊಂದವರು ದೂರಿದ್ದಾರೆ.ಘಟನೆಯು ಸಂಭವಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂಬುದು ಸ್ಥಳೀಯರ ಆಕ್ರೋಶ. "ಇನ್ನಾದರೂ ಅಧಿಕಾರಿಗಳು ನೊಂದವರಿಗೆ ನೆರವಾಗಬೇಕು," ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಡಾ. ರವಿ ಬಿ. ಕಾಂಬಳೆ ಅವರು ಖಂಡಿಸಿದ್ದಾರೆ.ಈ ವಿಚಾರ ತಿಳಿದ ಧ್ವನಿ ಸಂಘಟನೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು ಸ್ಥಳಕ್ಕೆ ತಕ್ಷಣ ದೌಡಾಯಿಸಿ ನೊಂದ ಕುಟುಂಬಕ್ಕೆ ದಿನಸಿ, ಬಟ್ಟೆ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಿ ಧೈರ್ಯ ತುಂಬಿದರು.ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಡಾ. ರವಿ ಬಿ ಕಾಂಬಳೆ, ತಾಲೂಕಾ ಉಪಾಧ್ಯಕ್ಷ ಸಂತೋಷ ಪಾಟೀಲ, ಕಾರ್ಯದರ್ಶಿ ಶಾಂತಿನಾಥ ಮಗದುಮ್ಮ ಹಾಗೂ ಖಜಾಂಚಿ ಮಹಾಂತೇಶ ಬೇವಿಕಟ್ಟಿ ಉಪಸ್ಥಿತರಿದ್ದರು. ವರದಿ : ಸಂತೋಷ್ ಪಾಟೀಲ್, ಹುಕ್ಕೇರಿ.

ಹುಕ್ಕೇರಿ : ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮ ಪಂಚಾಯತ ಸಭಾ ಭವನ ಕಟ್ಟಡ ಉದ್ಘಾಟನಾ ಸಮಾರಂಭ ಜರಗಿತು 15ನೇ ಹಣಕಾಸು ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಗ್ರಾಮ ಪಂಚಾಯತ್ ಸಭಾ ಭವನ ಕಟ್ಟಡದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಹೈಷಿಕೇಶಾನಂದ ಬಾಬು ಮಹಾರಾಜರು ಮದಿಹಳ್ಳಿ ಹಾಗೂ ಶ್ರೀ ವಾಮನದೇವರು ಮದಿಹಳ್ಳಿ ಉದ್ಘಾಟಕರಾದ ಶ್ರೀ ಟಿ ಆರ್ ಮಲ್ಲಾಡದ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ್ ಪಂಚಾಯತ್ ಹುಕ್ಕೇರಿ ಹಾಗೂ ಶ್ರೀಮತಿ ಲಕ್ಕವ್ವ ಬಾಳಪ್ಪ ಬಾಗಿ ಅಧ್ಯಕ್ಷರು ಗ್ರಾಮ ಪಂಚಾಯತ ಮುದಿಹಳ್ಳಿ ಶ್ರೀಮತಿ ಕೋಮಲ ಬಸವರಾಜ್ ಹೊಸಮನಿ ಉಪಾಧ್ಯಕ್ಷರು ಹಾಗೂ ಶ್ರೀ ಸುರೇಶ್ ತಳವಾರ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ್ ಮದಿಹಳ್ಳಿ ಇವರ ಅಮೃತ ಹಸ್ತದಿಂದ ಉದ್ಘಾಟನಾ ಸಮಾರಂಭ ಜರುಗಿತು ಈ ಸಮಾರಂಭದಲ್ಲಿ ಶ್ರೀಮತಿ ಲಕ್ಕವ್ವಾ ಬಾಳಪ್ಪ ಬಾಗಿ ಅಧ್ಯಕ್ಷರು. ಸದಸ್ಯರಾದ ಹಸನ್ ರಾಜೇಸಾಬ್ ಸನದಿ. ಶ್ರೀ ಶಿವಾಜಿ ಶೆಟ್ಟೆಪ್ಪ ಗಾಡಿವಡ್ಡರ್. ಶ್ರೀ ಕಾಶಿನಾಥ್ ಓಮಣ್ಣಾ ಮುತಗಿ. ಸದ್ದಾಂ ಮಲಿಕ್ ಬಳಿಗಾರ. ಗಣಪತಿ ಮುರಾರಿ ವಾಳಕಿ. ಶ್ರೀಮತಿ ಶೋಭಾ ಶಿವಾನಂದ ಖಾನಾಪುರಿ. ಶ್ರೀಮತಿ ಶಂಕರವ್ವ ಬೋರಪ್ಪ ತಳವಾರ. ಶ್ರೀಧರ್ ಕಾಡಪ್ಪ ಚೌಗಲಾ. ಕೆಂಪಣ್ಣಾ ಚೌಗಲಾ. ಸತ್ಯಪ್ಪ ಶಿವಲಿಂಗ ಮಾದರ. ಗುರುಸಿದ್ಧ ಬಸವವಂತ ಹಿಡಕಲ್. ಶ್ರೀಮತಿ ದಾನಮ್ಮ ರಮೇಶ್ ಆಲಗೂರಿ. ಶ್ರೀಮತಿ ಶಿವಕ್ಕಾ ಪುಂಡಲೀಕ. ಶ್ರೀಮತಿ ಯಲ್ಲವ್ವ ಮಾರುತಿ ಕುರುಬರ. ರವೀಂದ್ರ ಬಾಬು ಚಾಗಲಾ. ಭೀಮ್ ಸೇನ್ ಬಾಗಿ.ಡಾ.ಕಾಡೇಶ ಹೊಸಮನಿ. ಅಂಬರೀಶ್ ಬನ್ನಕಗೋಳ. ಮಲ್ಲಿಕಾರ್ಜುನ್ ಗೋಟೂರಿ. ಸಂತೋಷ್ ಪಾಟೀಲ್. ಸದಾ ಬಾಗಿ. ಮಲ್ಲಪ್ಪ ಮಾಣಗಾವಿ. ಸುಲ್ತಾನ್ ಸನದಿ. ಶಿವಪ್ಪ ಮುತ್ತಗಿ. ಸಂಜು ಗಾಯಕವಾಡ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನಿ. ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಸಿಬ್ಬಂದಿ ವರ್ಗದವರು ಮದಿಹಳ್ಳಿ ಶಿರಗಾಂವ ಎಸ್ ಡಿ ಎಮ್ ಸಿ ಅಧ್ಯಕ್ಷರು ಸರ್ವ ಸದಸ್ಯರು ಮದಿಹಳ್ಳಿ ಮತ್ತು ಶಿರಗಾವ್ ಗ್ರಾಮದ ಊರಿನ ಗುರು ಹಿರಿಯರು ಮುಖಂಡರು ಮಹಿಳೆಯರು ಉಪಸ್ಥಿತರಿದ್ದರು. ವರದಿ : ಸಂತೋಷ ಪಾಟೀಲ್, ಹುಕ್ಕೇರಿ.

ರಾಯಬಾಗ : ಇಂದು ನಾವು 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. 1947 ರ ಆಗಸ್ಟ್ 15 ರಂದು ನಾವು ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ದಿನವನ್ನು ಸ್ಮರಿಸುತ್ತೇವೆ. ಈ ದಿನವನ್ನು ಆಚರಿಸುವಾಗ, ನಾವು ನಮ್ಮ ದೇಶಕ್ಕಾಗಿ ಹೋರಾಡಿದ ಎಲ್ಲ ಮಹಾನ್ ನಾಯಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುತ್ತೇವೆ.ಭಾರತವು ಒಂದು ಬೃಹತ್ ಮತ್ತು ವೈವಿಧ್ಯಮಯ ದೇಶ. ನಾವು ಅನೇಕ ಭಾಷೆಗಳು, ಸಂಸ್ಕೃತಿಗಳು ಮತ್ತು ಧರ್ಮಗಳನ್ನು ಹೊಂದಿದ್ದೇವೆ, ಆದರೆ ನಾವು ಒಂದೇ ರಾಷ್ಟ್ರದ ಭಾಗವಾಗಿದ್ದೇವೆ. ನಮ್ಮೆಲ್ಲರನ್ನೂ ಒಂದುಗೂಡಿಸುವ ಅಂಶವೆಂದರೆ ನಮ್ಮ ದೇಶದ ಮೇಲಿನ ಪ್ರೀತಿ ಮತ್ತು ಗೌರವ.ಸ್ವಾತಂತ್ರ್ಯವೆಂದರೆ ಕೇವಲ ರಾಜಕೀಯ ಸ್ವಾತಂತ್ರ್ಯವಲ್ಲ. ಇದು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯವನ್ನು ಒಳಗೊಂಡಿದೆ. ನಾವು ನಮ್ಮ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಶ್ರಮಿಸಬೇಕು. ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಶಾಖೆ ರಾಯಬಾಗ ಅಧ್ಯಕ್ಷರಾದ ಉಮೇಶ ಭೂಪಾಲ ಪೋಳ ಹೇಳಿದರು, ಅವರು ರಾಯಬಾಗ ಸರ್ಕಾರಿ ನೌಕರರ ಭವನದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಎಲ್ಲರಿಗೂ 79ನೇ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು ತಿಳಿಸುತ್ತಾ ಮಾತನಾಡಿದರು, ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುರೇಶ್ ಕದ್ದು, ರಾಜ್ಯ ಪರಿಷತ್ ಸದಸ್ಯರಾದ ಮಲಿಕಜಾನ್ ಕೊರ್ಬು, ಸಂಘಟನಾ ಕಾರ್ಯದರ್ಶಿ ಕಲ್ಲಪ್ಪ ಗುಡಿಮನಿ, ನಾಮ ನಿರ್ದೇಶಿತ ನಿರ್ದೇಶಕರಾದ ಭಗವಂತ ಮಸಾಲಜಿ, ನಿಂಗಪ್ಪ ಬೀರಣಗಡ್ಡಿ, ಸದಾಶಿವ ಕಾಂಬಳೆ, ಪರಶುರಾಮ ಕುಂಬಾರ, ಸವಿತಾ ಜೋಲಾಪೂರೆ, ಮತ್ತಿತರು ಹಾಜರಿದ್ದರು.