ವಿಷಯಕ್ಕೆ ಹೋಗಿ
ರಾಯಬಾಗ : ರಾಯಬಾಗ ಪಟ್ಟಣದ ಮಾಸ್ ಆಫೀಸ್ ರಾಯಬಾಗ ಕಾರ್ಯಾಲಯದ ಸಭಾಭವನದಲ್ಲಿ ಸುಮಾರು ಹತ್ತು ದಿನಗಳ ಕಾಲ ಮಾಸ್ ಮಹಿಳಾ ಅಭಿವೃದ್ಧಿ ಸಂರಕ್ಷಣಾ ಸಂಸ್ಥೆ - ಘಟಪ್ರಭಾ ಹಾಗೂ ಮಾಸ್ ಮ್ಯಾಕೇಪೆ ಇವರ ಸಂಸ್ಥೆಯ ಸಹಯೋಗದಲ್ಲಿ 5ನೇ ತರಗತಿಯ ವಿದ್ಯಾರ್ಥಿಗಳ ಮೊರಾರ್ಜಿ ಪೂರ್ವಭಾವಿ ತರಬೇತಿ ಕಾರ್ಯಗಾರವು ದಿನಾಂಕ್ ಫೆಬ್ರವರಿ :- 19/2026 ರಿಂದ ಫೆಬ್ರುವರಿ :- 28 / 2026 ರ ವರೆಗೆ ಬಡತನ ಹಾಗೂ ಕಡುಬಡತನ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಉಪಹಾರ ಟೀ ಬಿಸ್ಕೆಟ್ ನೀಡುವುದರೊಂದಿಗೆ ಮಕ್ಕಳಿಗೆ ಹಲವೂ ವಿಷಯಗಳ ಹಾಗೂ ವಿಷಯವಾರು ತರಬೇತಿಯನ್ನು ನೀಡಿದರು ಅದೇ ರೀತಿ ಮಕ್ಕಳಿಗೆ ಯಾವ ರೀತಿಯಾಗಿ ಪರೀಕ್ಷೆಯನ್ನು ಎದುರಿಸಬೇಕು ಎಂಬುದನ್ನು ತಿಳಿಹೇಳಿದರು...ಈ ಸಂದರ್ಭದಲ್ಲಿ ಬಾಹುಸಾಹೇಬ್ ಸಾಮನೇ ಇವರು ಮಾತನಾಡಿ ರಾಯಬಾಗ್ ತಾಲೂಕಿನಲ್ಲಿ ಬರುವ ಹಳ್ಳಿಗಳ ಹಾಗೂ ಗ್ರಾಮಗಳಲ್ಲಿ ವಾಸಿಸುವ ಬಡತನ ಕಡುಬಡತನದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಐದನೇ ತರಗತಿಯ ಮಕ್ಕಳನ್ನು ಆಯ್ಕೆ ಮಾಡಿಕೊಂಡು ನಮ್ಮ ಮಾಸ ಸಹಯೋಗದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಪೂರ್ವಭಾವಿ ಪರೀಕ್ಷೆಯ ತರಬೇತಿ ಕಾರ್ಯಗಾರ ನೀಡುತ್ತಿದ್ದೇವೆ ಎಂದರು..ಈ ಸಂದರ್ಭದಲ್ಲಿ ವಲಯ ಶಿಕ್ಷಕರಾದ ಸಂತೋಷ್ ಕಾಂಬಳೆ, ಬಾಹುಸಾಹೇಬ್ ಸಾಮನೆ , ಪ್ರವೀಣ್ ಆಸೋದೆ, ಲಕ್ಷ್ಮೀಬಾಯಿ ಮಾಂಗ್, ಪುಷ್ಪಾ ಕಾಂಬಳೆ, ಅಶ್ವಿನಿ ಕೂರಣಿ, ರೋಜಾ ಸಿಂಗೆ, ಪರಶುರಾಮ್ ಕಾಂಬಳೆ, ದೀಪಾ ಕಾಂಬಳೆ ಹಾಗೂ ಮುದ್ದು ವಿದ್ಯಾರ್ಥಿಗಳು ಹಾಜರಿದ್ದರು...ವರದಿ : ರಮೇಶ್ ಕಾಂಬಳೆ,ರಾಯಬಾಗ
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು