ವಿಷಯಕ್ಕೆ ಹೋಗಿ
ಅಥಣಿ : ಅಥಣಿ ಮತಕ್ಷೇತ್ರದ ಬಾಡಗಿ ಗ್ರಾಮದ ನಮ್ಮೂರ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಹಾಗೂ ಗುರುವಂದನಾ ಸಮಾರಂಭವನ್ನು ಪೂಜ್ಯರೊಂದಿಗೆ ಹಾಗೂ ಗ್ರಾಮದ ಹಿರಿಯ ಮುಖಂಡರೊಂದಿಗೆ ಸಸಿಗೆ ನೀರೆರೆಯುವ ಮೂಲಕ ಸಮಾರಂಭವವು ನಡೆಯಿತು.. ಈ ಸಮಾರಂಭದ ದಿವ್ಯ ವೇದಿಕೆಯನ್ನು ಅಲಂಕರಿಸಿರುವ ಅಥಣಿ ಮತಕ್ಷೇತ್ರದ ಶಾಸಕರಾದ ಲಕ್ಷ್ಮಣ ಸವದಿ ಹಾಗೂ ಪರಮಪೂಜ್ಯರು ಗುರುವಿನ ಮಹಿಮೆಯನ್ನು ತಿಳಿಹೇಳಿದರು ಸ್ವಾಮಿ ವಿವೇಕಾನಂದರು ಹೇಳಿದಂತೆ ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ಮಾತ್ರ ಗುರಿ ಮುಟ್ಟಲು ಸಾಧ್ಯ, ಹರ ಮುನಿದರೆ ಗುರು ಕಾಯುವನು ಗುರು ಮುನಿದರೆ ಹರಕಾಯಲಾರ, ಗುರುವಿನ ಗುಲಾಮನಾಗುವ ತನಕ ದೊರೆಯದು ಮುಕ್ತಿ ಎಂದು ತಿಳಿ ಹೇಳಿದರು ಈ ಸಂದರ್ಭದಲ್ಲಿ ಶ್ರೀ ಮ,ನಿ,ಪ್ರ, ಡಾ|| ಮಹಾಂತಪ್ರಭು ಮಹಾಸ್ವಾಮೀಜಿಗಳು,ಶೇಗುಣಸಿ,ಶ್ರೀ ಪ,ಪೂ,ಅಮರೇಶ್ವರ ಮಹಾರಾಜರು,ಕೌಲಗುಡ್ಡ,ಶ್ರೀ ಪ,ಪೂ,ಸಿದ್ದಲಿಂಗ ಸಾಧು ಮಹಾರಾಜರು,ಬಾಡಗಿ,ಬೆಳಗಾವಿ ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಷನ್,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ,ಆರ್,ಮುಂಜೆ, ಹಾಗೂ ಹಿರಿಯ ಮುಖಂಡರಾದ ಸಂಗಯ್ಯ ಹಿರೇಮಠ,ಸಂಗನಗೌಡ ಪಾಟೀಲ, ಸುರೇಶ ಮಾಯಣ್ಣವರ, ಶೀತಲ ಪಾಟೀಲ,ಜಿ,ಎ, ಖೋತ ಹಾಗೂ ಶಿಕ್ಷಕ ಶಿಕ್ಷಕಿಯರು ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.ವರದಿ : ರಮೇಶ್ ಕಾಂಬಳೆ ಅಥಣಿ..
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು