ವಿಷಯಕ್ಕೆ ಹೋಗಿ
ರಾಯಬಾಗ : ರಾಯಬಾಗ ಪಟ್ಟಣದ ನೌಕರರ ಭವನ ಸಭಾ ಭವನದಲ್ಲಿ ಮಹಿಳಾ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆ ಘಟಪ್ರಭಾ ಮತ್ತು ಸಿ ಆರ್ ಎಂ ಐ ಟಿ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಇವರ ಸಹಯೋಗದೊಂದಿಗೆ ಮಾಜಿ ದೇವದಾಸಿ ಮಹಿಳೆಯರ ಮಕ್ಕಳು,, ಮೊಮ್ಮಕ್ಕಳು,,ಅನಾಥ ಮಕ್ಕಳು,, ಅರೆ ಅನಾಥ ಮಕ್ಕಳು ಹಾಗೂ ಸಂಕಷ್ಟ ಪರಿಸ್ಥಿತಿಯಲ್ಲಿರುವ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ನಿಧಿ ವಿತರಣಾ ಸಮಾರಂಭವನ್ನು ನಡೆಯಿತು....ಈ ಸಂದರ್ಭದಲ್ಲಿ ವೇದಿಕೆಯನ್ನು ಹಂಚಿಕೊಂಡಿರುವ ತಾಲೂಕ ಆಡಳಿತ ಉಪತಹಸಿಲ್ದಾರರಾದ ಪರಮಾನಂದ ಮಂಗಸೂಳಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ವಿಠ್ಠಲ್ ಚಂದರಗಿ, ಪೊಲೀಸ್ ಠಾಣೆಯ ಅಧಿಕಾರಿಗಳಾದ ನರಸಿಂಹರಾಜು, ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಭಾರತಿ ಕಾಂಬಳೆ ಮಾತನಾಡಿ ಶಿಕ್ಷಣವು ಕಲ್ಪವೃಕ್ಷವಿದ್ದಂತೆ ಶಿಕ್ಷಣದಿಂದಲೇ ನಾವು ಎಲ್ಲವನ್ನು ಗೆಲ್ಲಬಹುದು, ಎಲ್ಲರೂ ಉನ್ನತ ಶಿಕ್ಷಣವನ್ನು ಪಡೆಯಿರಿ , ಶಿಕ್ಷಣವನ್ನು ಅರ್ಧದಲ್ಲಿ ಮೊಟಕುಗೊಳಿಸಬೇಡಿ, ಶಿಕ್ಷಣವು ಸಮಾಜದಲ್ಲಿ ಒಬ್ಬ ಉತ್ತಮ ನಾಗರಿಕನನ್ನಾಗಿ ಇರುತ್ತದೆ ಶಿಕ್ಷಣವೇ ಸರ್ವಶ್ರೇಷ್ಠ ಶಿಕ್ಷಣಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ ಶಿಕ್ಷಣ ಪಡೆಯಿರಿ ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ ಎಂದರು ಅದೇ ರೀತಿ ನಿಮಗೆ ನೀಡಿರುವ ಪ್ರೈಸ್ ಮನಿ ಉತ್ತಮ ವಿದ್ಯಾಭ್ಯಾಸಕ್ಕೆ ಉಪಯೋಗಿಸಿ ಎಂದರು...ಈ ಸಂದರ್ಭದಲ್ಲಿ ಯಮನವ್ವ ಮಾದರ,ಡಾಕ್ಟರ್ ಆರ್ ಬಿ ಕಣಗಾವೆ ಚಿದಾನಂದ ಬಸವ ಪ್ರಭು ಕೋರೆ ಸಕ್ಕರೆ ಕಾರ್ಖಾನೆ ಚಿಕ್ಕೋಡಿ MD, ಉಪ ತಹಶೀಲ್ದಾರರು ಪರಮಾನಂದ ಮಂಗಸೂಳಿ,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ವಿಠ್ಠಲ್ ಚಂದರಗಿ,ತಾಲೂಕು ಪಂಚಾಯಿತಿ ಯೋಜನಾಧಿಕಾರಿಗಳಾದ N P ಬೀರನಗಡ್ಡಿ,ರಾಯಬಾಗ ಪೊಲೀಸ್ ಅಧಿಕಾರಿಗಳಾದ JD ನರಸಿಂಹರಾಜ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳಾದ ಭಾರತಿ ಕಾಂಬಳೆ. ಮಾಸ್ ಸಂಸ್ಥೆಯ CEO ಡಾಕ್ಟರ್ ಸೀತವ್ವ ಜೋಡಟ್ಟಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಹಾಗೂ ಮಾಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಈ ಕಾರ್ಯಕ್ರಮದ ನಿರೂಪಣೆ ಸಾಗರ್ ಶಿವನಕ್ನವರ ನೆರವೇರಿಸಿದರು ವರದಿ : ರಮೇಶ್ ಕಾಂಬಳೆ ರಾಯಬಾಗ
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು