ವಿಷಯಕ್ಕೆ ಹೋಗಿ
ಚಿಕ್ಕೋಡಿ : ನಾಳೆ ಉಪರಾಷ್ಟ್ರಪತಿ ಚಿಕ್ಕೋಡಿಗೆ ಆಗಮಿಸುವ ಹಿನ್ನಲೆಯಲ್ಲಿ ಚಿಕ್ಕೋಡಿ ಪಟ್ಟಣದಿಂದ ಯಡೂರಿನ ಗ್ರಾಮವರೆಗೆ ಇರುವ ರಸ್ತೆಯ ತಗ್ಗು–ಗುಂಡಿಗಳನ್ನು ಪಿ.ಡಬ್ಲ್ಯೂ.ಡಿ ಅಧಿಕಾರಿಗಳು ತುರ್ತುವಾಗಿ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ.ವರ್ಷಗಳ ಕಾಲ ರಸ್ತೆ ತಗ್ಗು–ಗುಂಡಿಗಳಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದರೂ, ಯಾವುದೇ ಶಾಶ್ವತ ಕ್ರಮ ಕೈಗೊಳ್ಳದ ಅಧಿಕಾರಿಗಳು, ಇದೀಗ ಗಣ್ಯರ ಭೇಟಿ ಹಿನ್ನೆಲೆ ತುರ್ತು ದುರಸ್ತಿ ಕಾರ್ಯ ನಡೆಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಸ್ಥಳೀಯರ ಪ್ರಕಾರ, ಮಳೆಗಾಲದಲ್ಲಿ ರಸ್ತೆ ಇನ್ನಷ್ಟು ಹದಗೆಟ್ಟು ಅಪಘಾತಗಳಿಗೂ ಕಾರಣವಾಗುತ್ತಿತ್ತು. ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆ ಸಿಗಲಿಲ್ಲ ಎಂದು ಆರೋಪಿಸಲಾಗಿದೆ. ಆದರೆ ಗಣ್ಯರ ಭೇಟಿ ಸುದ್ದಿ ಬಂದ ತಕ್ಷಣವೇ ರಸ್ತೆ ಮೇಲೆ ‘ತೆಪೆ’ ಕೆಲಸ ಕೈಗೊಂಡಿರುವುದನ್ನು ಜನರು ಪ್ರಶ್ನಿಸಿದ್ದಾರೆ.“ಮಾಡಬೇಕಾದರೆ ಶಾಶ್ವತ ಕಾಮಗಾರಿ ಮಾಡಿ, ಜನಪ್ರತಿನಿಧಿಗಳು ಬರ್ತಾರೆ ಅಂತ ತಾತ್ಕಾಲಿಕ ಕೆಲಸ ಮಾಡಬೇಡಿ” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಚಿಕ್ಕೋಡಿ ಪಟ್ಟಣದ ನಾಗರಿಕರು ರಸ್ತೆ ಅಭಿವೃದ್ಧಿಗೆ ದೀರ್ಘಕಾಲೀನ ಯೋಜನೆ ರೂಪಿಸಿ, ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು