ವಿಷಯಕ್ಕೆ ಹೋಗಿ
ಚಿಕ್ಕೋಡಿ : ಬಹುದಿನಗಳ ಬೇಡಿಕೆಯಾದ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯಾಗಿ ಪ್ರಸ್ತುತ ಬಜೆಟ್ ಅಧಿವೇಶನದಲ್ಲಿ ಘೋಷಣೆಯಾಗಬೇಕು ಎಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಲಾಯಿತು.ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷರಾದ ಸಂಜು ಬಡಿಗೇರ ಮಾತನಾಡಿ, ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ, ಚಿಕ್ಕೋಡಿ ಜಿಲ್ಲೆಯನ್ನಾಗಿ ಮಾಡ್ತೇವೆ ಮಾಡ್ತೇವೆ ಅಂತಾ ಸುಳ್ಳು ಹೇಳುತ್ತಾ ಬಹುಕಾಲ ಹರನ ಮಾಡಿದ್ದು ಸಾಕಾಯ್ತು, ಪ್ರಸ್ತುನ ಬಜೆಟ್ ಅಧಿವೇಶನದಲ್ಲಿ ನಮ್ಮ ಭಾಗದ ಮಂತ್ರಿಗಳು, ಶಾಸಕರು ಗಟ್ಟಿ ಧ್ವನಿ ಎತ್ತಬೇಕು, ಈಗಲೂ ಸಹ ಸುಳ್ಳು ಹೇಳಿಕೆ ಮುಂದೆವರೆದರೆ, ಬರುವ ಚುನಾವಣೆಯಲ್ಲಿ ಶಾಸಕರ ವಿರುದ್ಧವಾಗಿ ಜನಾ ಅಕ್ರೋಶಗೊಂಡು ಮತದಾನದ ಮೂಲಕ ಸುಳ್ಳುಗಾರರಿಗೆ ಪಾಠ ಕಲಿಸುವ ಸಮಯ ಸಮೀಪಿಸಲಿದೆ ಎಂದು ಆಕ್ರೋಶ ಮಾತುಗಳನ್ನು ಆಡಿದರು.ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಚುನಾವಣೆಗೆ ಮುಂಚೆ ಸಿದ್ಧರಾಮಯ್ಯಾ ಸಾಹೇಬರು, ಪ್ರಕಾಶ ಹುಕ್ಕೇರಿ ಸಾಹೇಬರು ಹಾಗೂ ಗಣೇಶ ಹುಕ್ಕೇರಿ ಸಾಹೇಬರು, ಚಿಕ್ಕೋಡಿಯ ಆರ್. ಡಿ. ಮೈದಾನದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ, ನಮ್ಮ ಸರಕಾರ ಬಂದರೆ ಚಿಕ್ಕೋಡಿ ಜಿಲ್ಲೆಯಾಗಿ ಮಾಡುವುದು ಮೊದಲನೇ ಕಾರ್ಯವೆಂದು ಹೇಳಿದ್ದೀರಿ, ಮೂರು ವರ್ಷ ಕಳೆದರೂ ಜಿಲ್ಲೆಯ ಎಲ್ಲ ಶಾಸಕರ ಸಭೆ ಮಾಡಿ ಮಾಡುತ್ತೇವೆ ಎಂದು ಪದೆ ಪದೆ ಸುಳ್ಳು ಹೇಳುತ್ತಿದ್ದೀರಿ ನುಡಿದಂತೆ ನಡೆಯುವ ಸರಕಾರ ಆಗದೇ ಚಿಕ್ಕೋಡಿ ಜಿಲ್ಲೆಯನ್ನಾಗಿ ಬಜೆಟ್ ಅಧಿವೇಶನದಲ್ಲಿ ಘೋಷಿಸಿ ಕೊಟ್ಟ ಮಾತನ್ನು ಉಳಿಸುಕೊಳ್ಳಿ ಎಂದು ಹೇಳಿದರು.ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಉಪಾಧ್ಯಕ್ಷರಾದ ಚಂದ್ರಶೇಖರ ಅರಭಾವಿ ಅವರು ಮಾತನಾಡಿ, ಆರೋಗ್ಯ ಶಿಕ್ಷಣ ಉದ್ಯೋಗ ರಾಜ್ಯದಲ್ಲಿ ಈ ಮೂರು ಸಮೃದ್ಧಿ ಆಗಿದ್ದರೆ ರಾಜ್ಯ ಬೆಳವಣಿಗೆ ಎಂದು ಹೇಳಬಹುದು, ಬೆಳಗಾವಿ ಜಿಲ್ಲೆ ವಿಶಾಲವಾಗಿದ್ದರಿಂದ, ಅನುದಾನ ಕೊರತೆಯಿಂದ ಶೂನ್ಯ ಅಭಿವೃದ್ಧಿ ಕಂಡು ಬರ್ತಾ ಇದೆ, ಕೂಡಲೇ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ, ಚಿಕ್ಕೋಡಿ ಜಿಲ್ಲೆಯನ್ನು ಘೋಷಿಸಿ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿ ಕಡೆಗೆ ಹೆಚ್ಚಿನ ಆದ್ಯತೆ ದೊರೆಯಲಿದೆ ಎಂದು ಹೇಳಿದರು.ಈ ಸಂಧರ್ಭದಲ್ಲಿ ಶಂಕರ ಅವಡಖಾನ, ಸುನೀಲ ತೇರದಾಳೆ, ರುದ್ರಯ್ಯಾ ಹಿರೇಮಠ, ಅಮೂಲ ನಾವಿ, ರಫೀಕ್ ಪಠಾಣ, ರಮೇಶ ಡಂಗೇರ ಸೇರಿದಂತೆ ಹೋರಾಟಗಾರು ಉಪಸ್ಥಿತರಿದ್ದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು