ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೆರೂರವಾಡಿ ಗ್ರಾಮದಲ್ಲಿ ಅಮಾನವಿಯ ಘಟನೆ ನಡೆದಿದೆ ವಿದ್ಯಾಶ್ರೀ ಕಿಲಾರಿ ಎಂಬ ಯುವತಿಯ ತಲೆ ಒಡೆದು ಬಡಕುಟುಂಬದ ಸದಸ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.ಬೀರಪ್ಪ ರಾಮಪ್ಪ ಕಜ್ಜಾನ್ನವರ ಎಂಬ ಯುವಕ ಕಳೆದ ಎರಡು ವರ್ಷಗಳಿಂದ ವಿದ್ಯಾಶ್ರೀಯನ್ನು ಮದುವೆ ಮಾಡಿ ಕೊಡುವಂತೆ ಕಾಡುತ್ತಿದ್ದ. ಬೀರಪ್ಪ ನಿಗೆ ಮಗಳನ್ನು ಕೊಡಲು ಹಿಂದೇಟು ಹಾಕಿದ್ದ ಮಹದೇವ ಕಿಲಾರಿ, ನಿನ್ನೆ ರಾತ್ರಿ ಏಕಾಏಕಿ ಮನೆಗೆ ನುಗ್ಗಿ ಹತ್ತು ಜನರೊಂದಿಗೆ ಆಗಮಿಸಿ ವಿದ್ಯಾಶ್ರೀ ಹಾಗೂ ಕುಟುಂಬದ ಐದು ಜನ ಸದಸ್ಯರ ಮೇಲೆ ಕಣ್ಣಿಗೆ ಖಾರದಪುಡಿ ಎರಚಿ ಕಬ್ಬಿಣದ ರಾಡನಿಂದ ಹಲ್ಲೆ ಮಾಡಿದ್ದಾರೆ ಗಾಯಾಳುಗಳನ್ನು ಚಿಕ್ಕೋಡಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ವರದಿ : ಅಲೋಕ ಚೌಗಲಾ, ಚಿಕ್ಕೋಡಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು