ಪೋಸ್ಟ್‌ಗಳು
ರಾಯಬಾಗ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಶಾಖೆ ರಾಯಬಾಗ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು "ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ" ಯನ್ನು ದಿನಾಂಕ: 01-10-2025 ರಿಂದ ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಿರುವುದು ತಮಗೆಲ್ಲ ತಿಳಿದಿದೆ.ಪತಿ-ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದಲ್ಲಿ ಒಬ್ಬರು ಮಾತ್ರ ವೇತನದಲ್ಲಿ ವಂತಿಕೆಯನ್ನು ನೀಡುವುದು.ರಾಜ್ಯ ಸರ್ಕಾರದ ಅಧಿಕಾರಿ/ನೌಕರರ ತಂದೆ-ತಾಯಿ ಪಿಂಚಣಿದಾರರಾಗಿದ್ದಲ್ಲಿ ಅವರ ಮಾಸಿಕ ಆದಾಯ ಮಿತಿಯನ್ನು ರೂ. 17,000/- ಗಳಿಂದ ರೂ. 27,000/- ಸಾವಿರಗಳಿಗೆ ಹೆಚ್ಚಳ ಮಾಡಿದೆ.ವಿವಾಹಿತ ಮಹಿಳಾ ನೌಕರರ ತಂದೆ-ತಾಯಿಯೂ ಸಹ ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದಾರೆ.ಮಾಸಿಕ ವಂತಿಕೆಯನ್ನು ನೀಡಲು ಇಚ್ಚಿಸದೇ ಇರುವ ನೌಕರರು ಲಿಖಿತವಾಗಿ ದಿನಾಂಕ: 18-10-2025 ರೊಳಿಗೆ ಸಂಬಂಧಿಸಿದ ಡಿ.ಡಿ.ಓ.ಗಳಿಗೆ ನೀಡುವುದು.ಈ ಯೋಜನೆಯ ಸೌಲಭ್ಯ ಪಡೆಯಲು ರಾಜ್ಯ ಸರ್ಕಾರದ ಅಧಿಕಾರಿ/ನೌಕರರು ಪ್ರತಿ ತಿಂಗಳು ಸರ್ಕಾರ ನಿರ್ದಿಷ್ಟಪಡಿಸಿರುವ ವಂತಿಕೆಯನ್ನು ಅಕ್ಟೋಬರ್-2025ನೇ ಮಾಹೆಯಿಂದ ನೀಡುವುದು.ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 5.25 ಲಕ್ಷ ಸರ್ಕಾರಿ ನೌಕರರು ಹಾಗೂ 25 ಲಕ್ಷ ಕುಟುಂಬ ಸದಸ್ಯರು ಈ ಯೋಜನೆಯ ಲಾಭ ಪಡೆಯಲಿದ್ದಾರೆ.ಈ ಯೋಜನೆಗೆ ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿ/ನೌಕರರು HRMS-1ರಲ್ಲಿ ನೋಂದಣಿ ಮಾಡಿಕೊಳ್ಳಲು ಕ್ರಮವಹಿಸುವುದು.ಎಂದು ರಾಯಬಾಗ ತಾಲೂಕು ಅಧ್ಯಕ್ಷ ಉಮೇಶ ಭೂಪಾಲ ಪೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಹುಕ್ಕೇರಿ : ಹುಕ್ಕೇರಿ ತಾಲೂಕಿನಲ್ಲಿ ಆಯೋಜಿಸಿದ ದಲಿತ ಸಮಾವೇಶದಲ್ಲಿ ಭಾಗವಹಿಸಿದ ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ ಜಾರಕಿಹೊಳಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾಂಗ್ರೆಸ್ ಮುಖಂಡರಾದ ಮಹಾವೀರ ಅಣ್ಣಾ ಮೋಹಿತೆ ಭಾಗವಹಿಸಿದರು ಈ ಸಂದರ್ಭದಲ್ಲಿ...ಮುಖಂಡರುಗಳಾದ ಕಿರಣ ರಾಜಪೂತ ಮಲ್ಲಿಕಾರ್ಜುನ್ ರಾಶಿಂಗೆ ಬಸು ಕೋಳಿ ಅಕ್ಷಯ ವೀರಮುಕ ಸಿದ್ದಿಕ ಅಂಕಲಗಿ ಹಾಗೂ ಪಟ್ಟಣದ ಹಾಗೂ ಹಳ್ಳಿಗಳಿಂದ ಆಗಮಿಸಿದ ಸಮಸ್ತ ದಲಿತ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಚಿಕ್ಕೋಡಿ : ಚಿಕ್ಕೋಡಿ ತಾಲೂಕಿನ ಹಲವು ಪ್ರಮುಖ ರಸ್ತೆಗಳು ಮಳೆಯಿಂದಾಗಿ ಮತ್ತು ನಿರಂತರ ವಾಹನ ಸಂಚಾರದಿಂದ ತುಂಬಾ ಹಾಳಾಗಿವೆ. ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ಉಂಟಾಗಿದ್ದು, ಸಾರ್ವಜನಿಕರು ಸಂಚಾರ ಮಾಡುವಲ್ಲಿ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ವಿಶೇಷವಾಗಿ ವಿದ್ಯಾರ್ಥಿಗಳು, ರೈತರು ಹಾಗೂ ಹಿರಿಯ ನಾಗರಿಕರಿಗೆ ಬಹಳ ಅಡಚಣೆ ಉಂಟಾಗಿದೆ. ಅಪಘಾತಗಳ ಸಾಧ್ಯತೆಯೂ ಹೆಚ್ಚಾಗಿದೆ.ಆದ್ದರಿಂದ, ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ಚಿಕ್ಕೋಡಿ ತಾಲೂಕಿನ ಮುಖ್ಯ ಹಾಗೂ ಆಂತರಿಕ ರಸ್ತೆಗಳನ್ನು ಶೀಘ್ರದಲ್ಲೇ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಕರ್ನಾಟಕ ನವನಿರ್ಮಾಣ ಸೇನೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ನವನಿರ್ಮಾಣ ಸೇನೆ ಯುವ ಘಟಕದ ಅಧ್ಯಕ್ಷರು ಸೂರಜ್ ಜಮಾದಾರ, ಉಪಾಧ್ಯಕ್ಷರಾದ ವಿಷ್ಣು ಪಾಂಡವ್ , ಸಂಚಾಲಕರಾದ ರಾಘವೇಂದ್ರ ನೆಸ್ಕರ್ , ಮಹೇಶ್ ಮಗದುಮ್ , ಅಜಯ್ ಬಾನಕರೆ , ರಾಜೇಂದ್ರ ಪಾಟೀಲ್, ಮೋಹಿನ ಮುಲ್ತಾನಿ , ಇನ್ನಿತರರು ಉಪಸ್ಥಿತರಿದ್ದರು.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೂಡಿ ಗ್ರಾಮದ ಮುರಾರ್ಜಿ ಶಾಲೆಯಲ್ಲಿ ದೋಷಿತ ಆಹಾರ ಸೇವಿಸಿ ಮಕ್ಕಳು ಅಸ್ತವ್ಯಸ್ತರಾಗಿದ ಘಟನೆ ಖಂಡಿಸಿ. ಘಟನೆಗೆ ಸಂಬಂಧಪಟ್ಟ ಶಾಲಾ ಅಡುಗೆ ಸಿಬ್ಬಂದಿ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲು ಕರ್ನಾಟಕ ರಕ್ಷಾಣಾ ವೇದಿಕೆ ಹಿರೇಕೊಡಿ ಗ್ರಾಮ ಘಟಕದ ಕಾರ್ಯಕರ್ತರು ಶಾಲಾ ಪ್ರಾಂಶುಪಾಲರಿಗೆ ಮನವಿ ಕೊಟ್ಟು ಸಂಬದಿಸಿದವರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿದರು.ಮಕ್ಕಳ ಜೀವದ ಜೋತೆ ಆಟ ಆಡುತ್ತಿರುವ ಜವಾಬ್ದಾರಿ ರಹಿತ ಸಿಬ್ಬಂದಿ ವರ್ಗವನ್ನು ತಕ್ಷಣವೇ ಅಮಾನತಿನಲ್ಲಿಟ್ಟು ಸಂಬಂಧಿಸಿದ ಘಟನೆ ಕುರಿತು ಸಮಗ್ರ ತನಿಖೆ ಮಾಡಬೇಕು. ಹಾಗೂ ಶಾಲಾ ಆವರಣದಲ್ಲಿ ಹಾಗೂ ಶಾಲಾ ಹಾಸ್ಟೆಲಗಳಲ್ಲಿ ಎಲ್ಲೆಡೆಯೂ ಸ್ವಚ್ಚತೆ ಹಾಗೂ ನೈರ್ಮಲ್ಯತೆ ಬಗ್ಗೆ ಕಾಳಜಿವಹಿಸಿ ಮಕ್ಕಳ ಶಿಕ್ಷಣದ ಜೋತೆ ಅವರ ಆರೋಗ್ಯವು ಅತಿ ಮುಖ್ಯವಾದದ್ದು ಅಂತಾ ಮನವರಿಕೆ ಮಾಡಿ ಮುಂದೆ ಈ ತರಹದ ಘಟನೆಗಳು ಮತ್ತೆಆಗದಂತೆ ನಿಗಾವಹಿಸಲು ಸೂಚಿಸಿದ್ದರು.ಈ ಸಂದರ್ಭದಲ್ಲಿ ಕರವೇ ಗ್ರಾಮ ಘಟಕದ ಅದ್ಯಕ್ಷರಾದ ಸಂಜೀವ್ ಕಾಂಬಳೆ . ಸಾಗರ ನಿಂಗಾಗೊಳ (ಉಪಾಧ್ಯಕ್ಷರು.ರಾಜು ಕಾಂಬಳೆ . ಅಜಿತ ಲೋಕರೆ,ರಜನೀಕಾಂತ್ ಬಡಿಗೇರ. ಮೋಷಿನ್ ಪಟೇಲ್. ರಾಜು ಪೆಂಡಾರಿ, ಪಾಶ್ವನಾತಥ ಬಾಳಿಕಾಯಿ.ಜೋತೆ ಹಲವಾರು ಕರವೇ ಸೇವಕರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಚಿಕ್ಕೋಡಿ ಜಿಲ್ಲಾ ಘೋಷಣೆ 2 ನೇ ಅಕ್ಟೋಬರ್ ಗಾಂಧಿಜೀ ಜಯಂತಿಯಂದು ಆಗಬೇಕೆಂದು, ಶ್ರಿ ಸಂಪಾಧನಾ ಮಹಾ ಸ್ವಾಮೀಜೀ ಅವರ ನೇತೃತ್ವದಲ್ಲಿ, ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ಮತ್ತು ಹಕ್ಕೊತ್ತಾಯ ಕಾರ್ಯಕ್ರಮ ಜರುಗಿತು.**ಸಂಪಾದನಾ ಸ್ವಾಮೀಜೀ ಅವರು ಮಾತನಾಡಿ ಮೂರು ದಶಕಗಳಿಂದ ನಮ್ಮ ಹೋರಾಟ ಸತತವಾಗಿ ನಡೆದಿದೆ, ಬೆಳಗಾವಿ ವಿಶಾಲವಾದ ಜಿಲ್ಲೆ ಆಡಳಿತ ದೃಷ್ಟಿಯಿಂದ ಜಿಲ್ಲಾ ವಿಭಜನೆ ಮಾಡಿ ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಣೆ ಮಾಡಿ, ಜಿಲ್ಲೆಗೆ ಬೇಕಾಗುವ ಎಲ್ಲ ಕಚೇರಿಗಳು ಚಿಕ್ಕೋಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ, ಜನರ ರೈತರ ಯುವಕರ ಅನುಕೂಲಕ್ಕಾಗಿ ಜಿಲ್ಲಾ ಘೋಷಣೆ ಅನಿವಾರ್ಯವಾಗಿದೆ, ನಾವು ಮೂರು ದಶಕಗಳಿಂದ ಗಾಂಧಿಯವರ ಸ್ವಾತಂತ್ರ್ಯ ಹೋರಾಟದಂತೆ ಅಹಿಂಸಾತ್ಮಕ ಹೋರಾಟ ಮಾಡುತ್ತ ಬಂದಿದ್ದೇವೆ, ಯಾರಿಗೂ ನಾವು ತೊಂದರೆ ಮಾಡಿಲ್ಲ, ಕಾರಣ ಬರುವ ಗಾಂಧೀಜೀ ಜಯಂತಿಯ ದಿನದಂದು ಚಿಕ್ಕೋಡಿ ಜಿಲ್ಲಾ ಘೋಷಣೆ ಮಾಡಿ ಎಂದು ಸರಕಾರಕ್ಕೆ ಒತ್ತಾಯಿಸಿದರು.ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಸದನದಲ್ಲಿ ಸತೀಶ ಜಾರ್ಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ, ಪ್ರಕಾಶ ಹುಕ್ಕೇರಿ, ಶಶಿಕಲಾ ಜೊಲ್ಲೆ, ಮಹೇಂದ್ರ ತಮ್ಮಣ್ಣವರ ಇವರು ಚಿಕ್ಕೋಡಿ ಜಿಲ್ಲೆ ಗಾಗಿ ಒತ್ತಾಯಿಸಿದ್ದಾರೆ, ಚಿಕ್ಕೋಡಿ ಜಿಲ್ಲೆಯಾಗಲು ಪ್ರಭಾವಿ ವ್ಯಕ್ತಿಗಳು ಕಂಟಕ ಮಾಡುತ್ತಿದ್ದಾರೆ, ಗೋಕಾಕ ಜಿಲ್ಲೆಯಾಗಲು ನಮ್ಮದೇನು ಅಭ್ಯಂತರವಿಲ್ಲ, ಕೂಡಲೇ ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಣೆ ಮಾಡಿ, ಇಲ್ಲಿಯವರೆಗೆ, ಕಿವಡ ವಕೀಲರು, ಮಾಜಿ ಶಾಸಕ ಬಾಳಾಸಾಹೇಬ ವಡ್ಡರ, ಹಕ್ಕ್ಯಾಗೋಳ, ಶೆಟ್ಟಿ ವಕೀಲರು, ಕಟ್ಟಿಮನಿ, ಹೀಗೆ ಬಹಳಷ್ಟು ಹಿರಿಯರು ಹೋರಾಟ ಮಾಡಿದ್ದಾರೆ, ನುಡಿದಂತೆ ನಡೆಯುವ ಸರಕಾರ ಕೂಡಲೇ ಚಿಕ್ಕೋಡಿ ಜಿಲ್ಲೆ ಘೋಷಣೆ ಮಾಡಲಿ ಎಂದು ಹೇಳಿದರು.ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಸಂಜು ಬಡಿಗೇರ ಮಾತನಾಡಿ, ನಮ್ಮ ಜೀವನ ಕೇವಲ ಹೋರಾಟದಲ್ಲಿಯೇ ಮುಂದೆವರಿದಿದೆ, ಪ್ರತಿಯೊಂದು ಸರಕಾರ ಸುಳ್ಳು ಹೇಳುತ್ತಲೇ ಬಂದಿವೆ, ಚಿಕ್ಕೋಡಿ ಜಿಲ್ಲೆ ಘೋಷಣೆ ಆಗದಿದ್ದಲ್ಲಿ ಮಾಜಿ ಸಚಿವರಾದ ಉಮೇಶ ಕತ್ತಿಯವರು ಕೇಳಿದ ಹಾಗೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಿ ಕೇಳುವ ದಿವಸಗಳು ಬರಲಿವೆ, ತೆಲಂಗಾನಾ ಮಾದರಿಯಲ್ಲಿ ಉಗ್ರ ಹೋರಾಟ ಮಾಡುವ ಪರಿಸ್ಥಿತಿ ಎದುರಾಗಲಿದೆ ಎಂದು ಸರಕಾರಕ್ಕೆ ಕಡಕ್ ಎಚ್ಚರಿಕೆ ನೀಡಿದರು..ಈ ಸಂಧರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ, ಉಪಾಧ್ಯಕ್ಷ ಶ್ರೀಕಾಂತ ಅಸೋದೆ, ಹೋರಾಟಗಾರರಾದ ಅನೀಲ ನಾವಿ, ಅಪ್ಪಾಸಾಹೇಬ ಹಿರೇಕೋಡಿ, ಪ್ರತಾಪ ಪಾಟೀಲ, ಚಂದ್ರಶೇಖರ ಅರಭಾವಿ, ಮಂಜು ಪರಗೌಡರ, ಖಾನಪ್ಪಾ ಬಾಡಕರ, ದುಂಡಪ್ಪಾ ಜೌಗಲಾ, ರುದ್ರಯ್ಯಾ ಹಿರೇಮಠ, ಮೋಹನ ಪಾಟೀಲ, ಶಿವು ಮದಾಳೆ, ಸಚೀನ ದೊಡ್ಡಮನಿ, ಮಾಳು ಕರೆಣ್ಣವರ, ರಫೀಕ್ ಪಠಾಣ, ಶಿವಾಜಿ ಖಾಡೆ, ಸಂತೋಷ ಕುರಣೆ, ಅಪ್ಪಾಸಾಹೇಬ ಕುರಣೆ, ಸಿದ್ಧರಾಮ ಕರಗಾವೆ, ಸುರೇಶ ಖದ್ದಿ ಹಾಗೂ ಇನ್ನಿತರ ಹೋರಾಟಗಾರರು ಉಪಸ್ಥಿತರಿದ್ದರು.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🔱ಓಂ ನಮಃ ಶಿವಾಯ 🔱 ಶ್ರಾವಣ ಮಾಸದ ನಾಲ್ಕನೇ ಸೋಮವಾರ ನಿಮಿತ್ಯ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬೆಳಗಾವಿ ಜಿಲ್ಲೆಯ ಅಂಕಲಿ ಗ್ರಾಮದಲ್ಲಿರುವ ಶ್ರೀ ಮಹಾ ಶಿವಾಲಯದಲ್ಲಿ ಮಹಾಶಿವನಿಗೆ ಲೋಕಕಲ್ಯಾಣಾರ್ಥಕವಾಗಿ ಜಲಾಭಿಷೇಕ.ಕ್ಷೀರಾಭಿಷೇಕ. ಮಹಾರುದ್ರಾಭಿಷೇಕ ಶಿವ ಅಷ್ಟೋತ್ತರ ಮಹಾಮಂಗಳಾರತಿ ಭಸ್ಮಾರ್ಚನೆ,, ಪುಷ್ಪಾಲಂಕಾರ ವಿಶೇಷ ಭಸ್ಮಾಲಂಕಾರ. ಸೇವೆಯನ್ನು ಶ್ರೀ ವೇ!! ಮೂ ಪ್ರಸಾದ್ ಗುರೂಜಿ ಇವರಿಂದ ನೆರವೇರಿಸಲಾಯಿತು ಎಲ್ಲ ಭಕ್ತಾದಿಗಳಿಗೂ ಆ ಭಗವಂತ ಆಯುಷ್ಯ. ಆರೋಗ್ಯ. ಭಾಗ್ಯ. ಸಕಲ. ಸಿರಿಸಂಪತ್ತು ಕೊಟ್ಟು ಕರುಣಿಸಲಿ ಎಂದು ಪ್ರಾರ್ಥಿಸಿದ್ದರು.....🙏
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು